Telegram Join My Telegram WhatsApp Join My WhatsApp

ಅಮರಾವತಿಯಲ್ಲಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ( Artificial Intelligence) ವಿಶ್ವವಿದ್ಯಾಲಯ:

ವೈಜ್ಞಾನಿಕ ಯುಗದಲ್ಲಿ ಜಗತ್ತು ತುಂಬಾ ವೇಗವಾಗಿ ಸಾಗುತ್ತಿದೆ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಆಧುನಿಕ ಜಗತ್ತು ಮುಗಿದು ವೈಜ್ಞಾನಿಕ ಜಗತ್ತಿಗೆ ಮಾನವ ಸಂಕುಲ ಕಾಲಿಟ್ಟಿದೆ ಅದರಲ್ಲೂ ಪ್ರಸ್ತುತ ಕೃತಕ ಬುದ್ಧಿಮತ್ತೆ (Artificial Intelligence) ಪ್ರಪಂಚದಲ್ಲಿ ಬದುಕುತ್ತಿದೆ ಹಾಗೆಯೇ ಭಾರತವು ಕೂಡ ಕೃತಕ ಬುದ್ಧಿಮತ್ತೆಯಲ್ಲಿ ಮುಂದುವರೆದಿದೆ ಅದಕ್ಕೆ ಸಾಕ್ಷಿ ಎಂಬಂತೆ ದೇಶದಲ್ಲಿ ಮೊದಲ ಎಐ ವಿಶ್ವವಿದ್ಯಾಲಯವನ್ನು ಆಂಧ್ರಪ್ರದೇಶದ ಅಮರಾವತಿಯಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

 NVIDIA ಸಹಯೋಗದೊಂದಿಗೆ”AI LIVING LABS” ಹೆಸರಿನ ವಿಶ್ವವಿದ್ಯಾಲಯ ಸ್ಥಾಪನೆ:

ಭಾರತದ ಮೊದಲ ವಿಶ್ವವಿದ್ಯಾಲಯವನ್ನು ಆಂಧ್ರಪ್ರದೇಶದ ಸರ್ಕಾರ ತನ್ನ ರಾಜಧಾನಿಯಾದ ಅಮರಾವತಿಯಲ್ಲಿ “ಎಐ ಲಿವಿಂಗ್ ಲ್ಯಾಬ್” ಎಂಬ ನಾಮಕರಣದೊಂದಿಗೆ ವಿಶ್ವವಿದ್ಯಾಲಯವನ್ನು NVIDIA ಸಹಾಯದಿಂದ ಸ್ಥಾಪಿಸುತ್ತಿದೆ; ಇದು ಕೃತಕ ಬುದ್ಧಿಮತ್ತೆ, ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ದಿಗೆ ಒತ್ತು ನೀಡಲಿದೆ. ಲಾಭ ರಹಿತ ಸಂಸ್ಥೆಯಾಗಿ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ; ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾಟ್ ಆಫ್ ಕಂಪನಿಗಳಿಗೆ  ವಿಶ್ವ ಮಟ್ಟದ ಸೌಲಭ್ಯಗಳನ್ನು ಒದಗಿಸಲಿದ್ದು ಕೃಷಿ, ಆರೋಗ್ಯ ಸೇವೆ, ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ AI  ಬಳಕೆಗೆ ಉತ್ತೇಜನ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ; ಹಾಗೂ ಆಂಧ್ರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಿಸಲಿದೆ.

AI ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವೇನು ?

ಜಗತ್ತು ವೈಜ್ಞಾನಿಕವಾಗಿ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬನೆ ಆಗುತ್ತಿದೆ ಹೀಗಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತರುವ ಮುಖ್ಯ ಉದ್ದೇಶದಿಂದ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ.ಆಂಧ್ರ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ ಇಲಾಖೆಯು ಇತ್ತೀಚೆಗೆ ಕೃತಕ ಬುದ್ಧಿಮತ್ತೆ, ಪರಿಸರ ವ್ಯವಸ್ಥೆ, ಮೂಲಸೌಕರ್ಯ ಮತ್ತು ತರಬೇತಿ ಕೇಂದ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕೃತ ಆದೇಶ ಹೊರಡಿಸಿದ್ದು ಈ ವಿಶ್ವವಿದ್ಯಾಲಯವನ್ನು ಜಾಗತಿಕ ತಂತ್ರಜ್ಞಾನದ ದೈತ್ಯ NVIDIA ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ

ಐಟಿ ಇಲಾಖೆ ಹಾಗೂ NVIDIA ಮದ್ಯ ಒಪ್ಪಂದ.

ಅಂದ್ರ ಸರ್ಕಾರದ ಐಟಿಐ ಇಲಾಖೆ ಹಾಗೂ ನಿವಿದ ಕಾರ್ಪೊರೇಷನ್ ನಡುವೆ ಪರಸ್ಪರ ಒಪ್ಪಂದವಾಗಿದ್ದು ಸರ್ಕಾರ ಯೋಜನೆಯನ್ನು 2013 ರ ಕಂಪನಿಯ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಅನುಮೋದನೆ ನೀಡಿದೆ. ಇದರ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ವಿಶ್ವಮಟ್ಟದ ಸೌಲಭ್ಯಗಳು ಒದಗಿಸುವುದು ಮುಖ್ಯ ಉದ್ದೇಶವಾಗಿದೆ.

 ಎಐ ವಿಶ್ವವಿದ್ಯಾಲಯದಿಂದ ಆಗುವ ಪ್ರಯೋಜನಗಳೇನು?

ಈ ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಆಂಧ್ರಪ್ರದೇಶದ ಅಮರಾವತಿ ನಗರದಲ್ಲಿ ಇರಲಿದ್ದು ಇಲ್ಲಿಂದಲೇ ರಾಜ್ಯದಾದ್ಯಂತ ಕಾರ್ಯನಿರ್ವಹಿಸುವಂತೆ ಯೋಚಿಸಲಾಗಿದೆ ಕೇವಲ ಶೈಕ್ಷಣಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸದೆ ಸಂಶೋಧನೆಗೆ ಮತ್ತು ನವೋದ್ಯಮಗಳಿಗೆ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲಿದೆ.  ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಲೈಟ್ ಪ್ರಾಜೆಕ್ಟ್ ಗಳು ,ಕೈಗಾರಿಕಾ ಇಂಟ್ರನ್ಸ್ ಶಿಪ್ ಗಳು ಮತ್ತು ಜಾಗತಿಕ ತಜ್ಞರು ನುರಿತ ಜ್ಞಾನಿಗಳಿಂದ ಇಲ್ಲಿ ಶಿಕ್ಷಣ ನೀಡಲಾಗುವುದು ಅಲ್ಲದೆ ಕೃಷಿ ಕ್ಷೇತ್ರ, ಆರೋಗ್  ಕ್ಷೇತ್ರ, ಉತ್ಪಾದನ ಕ್ಷೇತ್ರ, ವೆಂಟಿಕ್ ಕ್ಷೇತ್ರ, ಡಿಜಿಟಲ್ ಕ್ಷೇತ್ರ ಮತ್ತು ಸಾರ್ವಜನಿಕ ಸೌಕರ್ಯಗಳು ಮತ್ತು ಸರ್ಕಾರಿ ಆಡಳಿತ ಇಂತಹ ಹಲವಾರು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಉತ್ತೇಜಿಸುವಂತೆ ಮಾಡುವುದು ಈ ವಿಶ್ವವಿದ್ಯಾಲಯದ ಮುಖ್ಯ ಪ್ರಯೋಜನಗಳಾಗಿವೆ.

ಎಲ್ಲವೂ ಅಂದುಕೊಂಡಂತೆ ಈ ಏಐ ಲಿವಿಂಗ್ ಲ್ಯಾಬ್ ಕಾರ್ಯ ಪ್ರಾರಂಭಿಸಿದರೆ ಇದು ಭಾರತದ ಮೊದಲ ವಿಶ್ವವಿದ್ಯಾಲಯ ಎಂದು ಇತಿಹಾಸ ಬರೆಯಲಿದೆ ಆಂಧ್ರಪ್ರದೇಶ ರಾಜ್ಯಕ್ಕೆ ಇದರ ಕೀರ್ತಿ ಸಲ್ಲುತ್ತದೆ ಇದರಿಂದ ಆಂಧ್ರಪ್ರದೇಶ ರಾಜ್ಯವು ತಂತ್ರಜ್ಞಾನ ಮತ್ತು ನವೋದಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದು ಹಲವಾರು ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ.

 

Leave a Comment